KGF ಸಂತ್ರಸ್ತರಿಗೆ ತಲುಪಿದ ನೆರವು…

ಗೆಳೆಯರೆ,

ಕಳೆದ ಭಾನುವಾರ ಟಿ.ಕೆ. ದಯಾನಂದ್, ದಿನೇಶ್ ಕುಮಾರ್, ಮತ್ತು ಗೆಳೆಯರು KGFಗೆ ಹೋಗಿ ಸುಮಾರು 50 ಸಂತ್ರಸ್ತ ಕುಟುಂಬಗಳಿಗೆ ನೆರವನ್ನು ನೀಡಿ ಬಂದಿದ್ದಾರೆ. ಅದರ ವಿವರಗಳನ್ನು ಒಂದೆರಡು ದಿನದಲ್ಲಿ ಪ್ರಕಟಿಸಲಿದ್ದೇವೆ. ಹಾಗೆಯೇ, ರಸೀತಿಯನ್ನೂ ಸಹ. ದಿನೇಶ್ ಕುಮಾರ್‌ರವರು ಈಗ ತಾನೆ ಅಂದಿನ ಹಂಚಿಕೆ ಕಾರ್ಯದ ಕೆಲವು ಫೋಟೋಗಳನ್ನು ಕಳುಹಿಸಿದ್ದಾರೆ. ಅವರಿಗೆ ಮತ್ತು ಇದನ್ನು ಸಾಧ್ಯ ಮಾಡಿದ ಎಲ್ಲರಿಗೂ ಮತ್ತೊಮ್ಮೆ ವರ್ತಮಾನದ ಬಳಗದ ಪರವಾಗಿ ಧನ್ಯವಾದಗಳು.

ಅಂದಹಾಗೆ, ನಮಗೆ ಭಾನುವಾರದ ತನಕವೂ ನೆರವು ಹರಿದು ಬಂದಿತ್ತು. ಒಟ್ಟು ರೂ. 35000 ಹಣಸಂಗ್ರಹವಾಗಿದ್ದು, ಅದರ ಅಂತಿಮ ವಿವರ ಹೀಗಿದೆ: ವರ್ತಮಾನ ಬಳಗ – 5000,, ರಾಮಕೃಷ್ಣ ಎಂ – 10000, ಮಾನಸ ನಾಗರಾಜ್ – 500, ಅನಾಮಧೇಯ-1 – 1000, ಎಸ್. ವಿಜಯ – 1000, ಸ್ವರ್ಣ ಕುಮಾರ್ ಬಿ.ಎ. – 1500, ಬಿ. ಶ್ರೀಪಾದ ಭಟ್ – 2000, ಅನಾಮಧೇಯ-2 – 500, ಅಕ್ಷತಾ – 1000, ಸಂದೀಪ್/ರಾಘವೇಂದ್ರ ಸಿ.ವಿ. – 2000, ಪಿ.ರಂಗನಾಥ – 2000, ತ್ರಿವೇಣಿ ಟಿ.ಸಿ. – 1000, ಅವಿನಾಶ ಕನ್ನಮ್ಮನವರ – 500, ಸತೀಶ್ ಗೌಡ ಬಿ.ಎಚ್. (ಕ.ರ.ವೇ.) – 500, ಆರ್.ಕೆ.ಕೀರ್ತಿ (ಕ.ರ.ವೇ.) – 1000, ಬಿ. ಸಣ್ಣೀರಪ್ಪ (ಕ.ರ.ವೇ.) – 500, ಸಿ.ವಿ.ದೇವರಾಜ್ (ಕ.ರ.ವೇ.) – 1000, ನಂದಿನಿ ಎ.ಡಿ. – 500, ಶಿವಕುಮಾರ್ ದಂಡಿಗೆಹಳ್ಳಿ – 2000, ಕಾರ್ತಿಕ್ ಡಿ.ಪಿ. – 1500.










4 thoughts on “KGF ಸಂತ್ರಸ್ತರಿಗೆ ತಲುಪಿದ ನೆರವು…

  1. ಕವಿಸ್ವರ, ಶಿಕಾರಿಪುರ

    ಹೊರಜಗತ್ತಿನವರ ಮಲಿನಗೊಂಡ ಮನಸ್ಸುಗಳು ಮತ್ತು ಮಲಹೊರುವ ಮಾನವರ ಮುಗ್ಧ ನಗು ಅದಕ್ಕೆ ಕಾರಣರಾದ ವರ್ತಮಾನದ ಗೆಳೆಯರ ಮಾನವೀಯ ಮನಸ್ಸುಗಳನ್ನು ನೆನೆದು ಅದ್ಯಾಕೋ ಮನಸು ಉಮ್ಮಳಿಸಿ ಬರುತಿದೆ.. ಅದ್ಹೇಗೆ ಹೇಳಲಿ ನಿಮಗೆ ಧನ್ಯವಾದ.. ಧನ್ಯವಾಗಿದೆ ನಮ್ಮ ತನು-ಮನ-ಧನ…

    Reply
  2. prasad raxidi

    ಗೆಳೆಯರೆ.. ಸಂತ್ರಸ್ತರ ಮುಖದಲ್ಲಿ ಭರವಸೆಯ ಕಿರುನಗು ಮೂಡಿಸಿದ ನಿಮಗೆಲ್ಲ ಅಭಿನಂದನೆಗಳು..

    Reply
  3. chandrashekar.p

    ಮೊಟ್ಟಮೊದಲನೇಯದಾಗಿ ಮಲಹೊರುವವರು ಯಾರು ನಮ್ಮನ್ನು ಕರೆದು ನಮ್ಮಗೆ ನ್ಯಾಯ ಕೊಡಿಸಿ ಅಂತ ಕೇಳಲಿಲ್ಲ. ಸವಣೂರಿನ ಘಟನೆಯಿಂದ ನಮ್ಮ ಸಮುದಾಯದಲ್ಲಿ ಇಂತಹ ಘೋರವಾದ ಜೀವನವನ್ನು ಬದಲಾಯಿಸಬೇಕು ಎಂದು ಒಂದು ತಂಡವಾಗಿ ಪ್ರಾರಂಭವಾದ ಸಂಶೋಧನೆಯ ಭಾಗವಾಗಿ ಕೆ.ಜಿ.ಎಫ್ ನಲ್ಲಿಯೂ ಸಹ ಇದರ ಬಗ್ಗೆ ಮಾಹಿತ ದೊರತೆ ನಂತರ ನಾವು ಅಧ್ಯಯನಕ್ಕೆ ಹೋಗಿದ್ದು.
    ಈ ಲೇಖನವನ್ನು ಮಧ್ಯಾನ ನೋಡಿದಾಗ ತುಂಬಾ ನೋವಾಯಿತು. ಸಂಕಟವನ್ನು ತಡೆಯಲು ಸಾಧ್ಯವಾಗಲಿಲ್ಲ. ನನಗೆ ಈ ಪ್ರಕ್ರೀಯೆಯ ಬಗ್ಗೆ ಮಾಹಿತಿ ತಿಳಿದಾಗಿನಿಂದ ಅಸಮಧಾನ, ಭಿನ್ನಾಭಿಪ್ರಾಯಗಳು ಇತ್ತು, ಈ ನಡುವಳಿಕೆಯೇ ಅನೇಕ ಸಮಸ್ಯೆಗಳನ್ನು ಹುಟ್ಟುಹಾಕುತ್ತಿರುವುದನ್ನ ಸಣ್ಣ ಪ್ರಮಾಣದಲ್ಲಿ ಊಹಿಸಿದ್ದೆ. ಈ ಕುರಿತು ಕಳೆದ ಸಫಾಯಿಕರ್ಮಚಾರಿ ಸಮಿತಿಯಲ್ಲಿ ಈ ವಿಷಯವಾಗಿ ಗಂಭೀರ ಚರ್ಚೆ ನಡೆಯಿತು, ನಾನು ಮತ್ತು ಪುರು ಇದನ್ನ ತೀರಾ ವಿರೋಧಿದೇವು. ಆ ಸಭೆಯಲ್ಲಿ ದಯಾ ಕಾರಣಾಂತರದಿಂದ ಬಂದಿರಲಿಲ್ಲ. ಇದು ಸಭೆಯಲ್ಲಿ ಭಾಗವಹಿಸಿದ್ದವರು ಸಹ ಒಪ್ಪಿಕೊಂಡರು. ತಕ್ಷಣದ ನಿರ್ಧಾರದಿಂದ ತುಳಿದ ಹಾದಿಯಾದ ಕಾರಣ ಅದನ್ನು ಅದಷ್ಟು ಬೇಗ ಬಗೆಹರಿಸಿಕೊಳ್ಳಬೇಕು. ನಾವು ಮುಂದುವರೆಯಬೇಕ್ಕಾಗಿರುವ ದಾರಿ ಅದಲ್ಲ ಎಂಬವ ಸ್ಪಷ್ಟ ನಿರ್ಧಾರಕ್ಕೆ ಬರಲಾಗಿದೆ.

    ಈ ಪ್ರಕ್ರೀಯೆಯಲ್ಲಿ ಪ್ರಮುಖವಾಗಿ ನನಗೆ ಕಂಡುಬರುವ ಸಮಸ್ಯೆಗಳು :
    1. ಬಳಕೆ ಮಾಡಿರುವ ಪದಗಳು :
    ಮಲಸಂತ್ರಸ್ಥರು : ಮಲಸಂತ್ರಸ್ಥರು ಎಂದರೇನು? ಪ್ರಮುಖವಾದ ಮತ್ತು ಪ್ರಾಥಮೀಕ ಪ್ರಶ್ನೆ, ಇದನ್ನ ನೀವು ವ್ಯಾಖ್ಯಾನ ಮಾಡಿದ್ದಾರು ಹೇಗೆ, ಭರ ಸಂತ್ರಸ್ಥರು, ಸುನಾಮಿ ಸಂತ್ರಸ್ಥರು, ಪ್ರವಾಹ ಸಂತ್ರಸ್ಥರು ಅನ್ನುವ ರೀತಿಯಲ್ಲಿ ವ್ಯಾಖ್ಯಾನಿಸಿರುವುದು ಎಂತಹ ದುರಂತವೆಂದರೆ, ಭರ, ಸುನಾಮಿ, ಪ್ರವಾಹಗಳಂತೆಯೆ ಮಲಹೊರುವ ಮದ್ಧತಿ?, ಅದು ಈ ವ್ಯವಸ್ಥೆಯಲ್ಲಿನ ಜಾತಿ ಕ್ರೌರ್ಯವಲ್ಲವೆ? ಜವಬ್ದಾರಿಯನ್ನು ವಹಿಸಿಕೊಳ್ಳಬೇಕ್ಕಾದ ಸಮಾಜ ಮತ್ತು ಸರ್ಕಾರ ತನ್ನದಲ್ಲದಂತೆ ವಿಷಯ ಮತ್ತು ಗಮನವನ್ನು ಮತ್ತೊಂದು ದಾರಿ ತೆಗೆದುಕೊಂಡು ಹೊಗಲು ಸಹಕಾರಿಯಾಗಿದೆ.

    ಮಲಮಕ್ಕಳು : ಸ್ವಲ್ಪವಾದ ಘನತೆಯಿಂದ ಆ ಸಮುದಾಯವನ್ನು ನೋಡುವ ನೋಟವಿದಿದ್ದರೆ ಈ ರೀತಿಯ ಪದಗಳು ಹುಟ್ಟುತ್ತಿರಲಿಲ್ಲ. ಇನ್ನು ಮತ್ತಷ್ಟು
    ಮಲಹೊರುವ ಪದ್ಧತಿ ಒಂದು ಅನಿಷ್ಠವಾದದ್ದು, ಅದನ್ನು ನಿರ್ಧಿಷ್ಠ ಸಮುದಾಯ ಮಾಡುವಂತೆ ಹೇರಲಾಗಿದೆ ಎಂಬ ಸತ್ಯವು ಯಾರಿಗೂ ಬೇಡವಾಗಿದೆ. ಕರುಣೆಯ ನೋಟದಿಂದ, ಅಯ್ಯೋ… ಪಾಪ… ಅನ್ನುತ್ತ ತನ್ನಲ್ಲಿರುವುದನ್ನು ಅತ್ತ ತಳ್ಳುವ ರೀತಿಯಲ್ಲಿ ಯೋಚಿಸಿದರೆ ಫಲವೇನು?
    ಈ ರಾಜ್ಯದಲ್ಲಿರುವ ಸಾವಿರಾರು ಮಲಹೊರುವ ಕುಟುಂಬಗಳು ಹಸಿವಿನಿಂದ ನರಳುತಿವೆ. ಅಂತವರಿಗೆ ಎಷ್ಟು ದಿನ ಊಟ ಹಾಕಲು ಸಾಧ್ಯ. ಸಾಧ್ಯವಿಲ್ಲವೆಂಬುದು ನಿಮಗೂ ತಿಳಿದಿದ್ದರೆ ನಿಮ್ಮ ಮುಂದಿನ ದಾರಿ ಏನು? ಅದನ್ನು ಸ್ಪಷ್ಟ ಪಡಿಸಬೇಕು.
    ಮೊನ್ನೆ ಸತ್ತವರರಲ್ಲಿನ ನಾಗರಾಜುವಿನ ಮಗವಿನ ವಯಸ್ಸು 3 ತಿಂಗಳು ಇರಬಹುದು. ಆ ಮಗುವಿಗೆ ಬೇಕ್ಕಾಗಿರುವ ಭವಿಷ್ಯವನ್ನು ನಮ್ಮಿಂದ ನಿರ್ಮಿಸುವಂತಹ ನೆಲೆಯನ್ನು ಕಟ್ಟಲು ಪ್ರಯ್ನಿಸಲೇ ಇಲ್ಲವಲ್ಲ.
    ಸುಮಾರು 20 ತಿಂಗಳ ಹಿಂದೆ ಮಾನವ ಹಕ್ಕುಗಳ ಆಯೋಗಕ್ಕೆ ತಮ್ಮ ದೂರನ್ನು ನೀಡಲು ಬಂದಾಗ, ಅಲ್ಲಿನ ಪರಿಸ್ಥಿಯ ಬಗ್ಗೆ ಹೇಳಿದರು, ಅದಕ್ಕೆ ತಕ್ಷಣ ಪರಿಹಾರವಾಗಿ ಕಂಡುಬಂದಿರುವುದು ಹಣ ಸಂಗ್ರಹ ವಿಧಾನ. ಈ ಹಂತದಲ್ಲಿ ನಡೆಸಲಾಗಿರುವ ಪ್ರಚಾರದಲ್ಲಿ ಬಳಸಲಾಗಿರುವ ಪದಗಳು ಮತ್ತು ಅವುಗಳ ಹಿಂದೆ ಇರುವ ಮನಸ್ಸುಗಳು ಈ ಸಮಸ್ಯೆಯನ್ನು ಪ್ರಧಾನವಾಗಿ ಕಾಣುತ್ತಿದ್ದಾರೆ ಎನ್ನುವುದು ತಿಳಿಯದೇ ಇರದು. ಹಸಿವಿನ ಬಗ್ಗೆ ಮಾಹಿತಿ ನಿಡಿದ್ದು 20 ದಿನಗಳ ಹಿಂದೆ ಆದರೆ ಸಮಾಗ್ರಿಗಳನ್ನು ನೀಡಿದ್ದು 2 ದಿನಗಳ ಹಿಂದೆ. ಹಸಿವಿನಿಂದ ನರಳುವರು ಇಷ್ಟು ದಿನ ಬದುಕಿದ್ದಾದರು ಹೇಗೆ. ಹಾಗಾದರೆ ಹಸಿವು ಇರಲಿಲ್ಲವೇ ಎಂಬ ಪ್ರಶ್ನೆ ಬರುತ್ತದೆ. ಖಂಡಿತ ಇದೆ. ಆ ಹಸಿವೇ ಮಲಹೊರುವ ಕೆಲಸಕ್ಕೆ ಪೂರಕವಾದ ಅಂಶಗಳಲ್ಲಿ ಒಂದು. ಅದಕ್ಕೆ ಪರಿಹಾರ ಒಂದು ದಿನದ ಊಟವೇ? ಅನಿಷ್ಠ ಪದ್ಧತಿಯ ಅಸ್ತಿತ್ವವನ್ನು ಹೊರ ಪ್ರಪಂಚಕ್ಕೆ ತಂದಿದ್ದು ಈ ಸರ್ಕಾರಕ್ಕ, ಮಲ ಹೊರುವ ಕೆಲಸ ಮಾಡಿಸುತ್ತಿದ್ದ ಸಮಾಜ “ನಾಗರೀಕರಿಗೂ” ಸರಿಕಾಣಲಿಲ್ಲ. ಆದ ಕಾರಣ ಯಾರು ಮಾತನಾಡುತ್ತಿಲ್ಲ. ಈ ರೀತಿ ಮಾತನಾಡದವರು ಮತ್ತು ಬೀದಿಗೆ ಬಾರದವರು ತುಳಿಯುವ ಹಾದಿಯೇ ಸಹಾಯ, ಕರುಣೆ.
    ನೈ ತೀಕತೆಯಿಂದ ನೋಡುವುದಾದರೆ ಈ ನಗರದಲ್ಲಿ ಇರುವವರೇಲ್ಲರು ಮಲಹೊರುವ ಪದ್ಧತಿಗೆ ಕಾರಣರಾಗಿದ್ದೀವಿ. MYSORE ನಗರದಲ್ಲಿರುವ ಮಾನ್ ಹೋಲ್ ನಲ್ಲಿ ಇಳಿದು ಕೆಲಸ ಮಾಡಿ ತನ್ನ ಕೈ ಹೆಬ್ಬೇರಳನ್ನು ಕಳೆದುಕೊಂಡಿರುವರು ಮಾತನಾಡಿದ್ದು ಭಯ ಹುಟ್ಟಿಸಿತ್ತು. ಮುಗ್ದಂತೆಯಿಂದ ಮಾತನಾಡುತ್ತ “ ಕೆಲವರು ಅಕ್ರಮ ಸಂಬಂಧಗಳನ್ನ ಇಟ್ಟುಕೊಂಡಿರುವರಿಗೆ ಮಕ್ಕಳಾದಾಗ ಅವರು ಆ ಮಕ್ಕಳನ್ನ ಮಾನ್ ಹೋಲ್ ಗಳಲ್ಲಿ ಹಾಕಿಬಿಟ್ಟಿರುತ್ತಾರೆ. ಅದು ಅಡ್ಡ ಸಿಕ್ಕಾಕಿಕೊಂಡಿರುತ್ತದೆ. ಒಳಗೆ ಇಳಿದು ಕೆಲಸ ಮಾವಾಗ ಕ್ಯ ಹಾಕಿ ತೆಗೆಯುವಾಗ ಅದು ಸಿಗುತ್ತದೆ. ಇನ್ನೂ ಹೆಂಗಸರು Period women ಬಳಸುವ ಬಟ್ಟೆಗಳು, ಗಡ್ಡ ಕೇರೆದುಕೊಂಡ ಬ್ಲೇಡ್ ಗಳು ಇದರಲ್ಲೆ ಹಾಕಿರುತ್ತಾರೆ. ಇನ್ನು ಅಸ್ಪತ್ರೆಯ ಪೈಪ್ ಲಿಂಕ್ ಇದಕ್ಕೆ ಕೊಟ್ಟಿರುತ್ತಾರೆ, ಏನೇನೊ ರೋಗಗಳಿರುತ್ತದೆ. ಕುಷ್ಟರೋಗ, ಕ್ಯಾನ್ಸರ್ ಎಡ್ಸ್ ರೋಗ ಇರೋರ ಮಲ ಮೂತ್ರಗಳನ್ನ ಇದಕ್ಕೆ ಬಿಟ್ಟಿರುತ್ತಾರೆ. ನಾವು ಅದರೊಳಗೆ ಕೆಲಸ ಮಾಡಬೇಕು” ಎಂದು. ( ಇದು ಅವರ ಮಾತುಗಳ ಪ್ರಮುಖ ಭಾಗ ಅಷ್ಟೆ) ಈ ಸಮಾಜದಲ್ಲಿರುವವರ ‘ನಾಗರೀಕರ’ ಕ್ರೌರ್ಯ, ಬೆಜ್ವಬ್ದಾರಿಯುತ ಬದುಕಿನ ರೂಪವಲ್ಲವೇ? Dನಾವು ಭಾಗಿದಾರಲ್ಲವೇ? ಈ ಬದುಕುಗಳು ಕಾಣದಂತೆ ಬೆಳೆದಿರುವ ಅಧಿಕಾರ ಮತ್ತು ಹಣದ ಪೊರೆಯನ್ನು ಕಿತ್ತುಹಾಗಬೇಕ್ಕಾಗಿದೆ.
    ಒಂದು ವೇಳೆ ಮಲಹೊರುವ ಪದ್ಧತಿ ನಿರ್ಮೂಲೆ ನಮ್ಮೆಲ್ಲರ ಜವಬ್ದಾರಿಯೇಂದು ಪರಿಗಣಿಸುವುದಾದರೆ ನಾವು ಮಾಡಬೇಕ್ಕಾದ ಮೊದಲ ಕೆಲಸ ಬೀದಿಗೆ ಇಳಿದು ಪ್ರತಿಭಟನೆ ನಡೆಸುವುದು, ಅದು ಒಂದು ದಿನವಾಗಬಹುದು ಒಂದು ತಿಂಗಳಾಗಬಹುದು. ಈ ಸರ್ಕಾರದ ಜಡತ್ವಕ್ಕೆ ಬೆಂಕೆ ಹಿಡುವ ಮುಖಾಂತರ. ಅದು ಮಾತ್ರ ನಮ್ಮ ದಾರಿ, ಅದೇ ಪರಿಹಾರ. ಅದಕ್ಕೆ ಸಿದ್ಧರಿರುವರು ಜೊತೆಗೊಂಡರೆ ಆನೆ ಭಲ,
    ಅದು ಬಿಟ್ಟು ಕರುಣೆಯಿಂದ ನೋಡುವ ಗುಂಪಿನ ಸಾಧ್ಯತೆಯ ಬಗ್ಗೆ ನನಗೆ ನಂಬಿಕೆ ಇಲ್ಲ.

    chandrashekar.p

    Reply

Leave a Reply

Your email address will not be published. Required fields are marked *